ಎಂಥ ಕಾಲ ಬಂತಪ್ಪಾ…!
ಕೇಳ್ರಪ್ಪೋ… ಕೇಳ್ರಿ
ಕಾಲ ಪೂರ ಕೆಟ್ಟು ಕೆರ ಹಿಡಿದ್ಐತೋ
ನೀತಿವಂತ್ರು ನೀತಿ ಬಿಟ್ಟು
ಮಂಗನಾಟ ನಡಿಸ್ಯಾರೋ
ಅಧಿಕಾರದ ಹೆಸರಿನಾಗ ಜನರ
ಸುಲಿಗಿ ಮಾಡಾಕತ್ಯಾರೋ
ಅಭಿರುದ್ಧಿ ಹೆಸರಲಿ
ರಾಜ್ಯ ಕೊಳ್ಳಿ ಹೊಡಿಯಾಕತ್ಯಾರೋ
ಧರ್ಮದ ಹೆಸರೇಳಿಕೊಂಡು
ಕಾವಿತೊಟ್ಟು ಕಾಮನಾಟ ನಡಿಸ್ಯಾರೋ
ಕಾಕಿ ಹೆಸರಲಿ ಸಾಮಾನ್ಯರ ಮೇಲೆ
ಲಾಟಿ ಪ್ರಹಾರ ಮಾಡ್ಯಾರೋ
ಕಾದಿ ಹೆಸರಲಿ ವಿಧಾನಸೌಧದ ಮಾನ ಕಳದಾರೋ
ಪ್ರಜಾಪ್ರಭುತ್ವ ಎನ್ನುವ ಹೆಸರಲಿ ಜನರನು
ಅಡ್ಡದಾರಿಗೆ ಎಳಿದಾರೋ
ಮಠಮಾನ್ಯಗಳು ಜನರಿಗೆ ಸುಳ್ಳು ಸುಳ್ಳೆ
ಧರ್ಮಬೋಧೆ ನಡೆಸಾಕತ್ಯಾವೋ
ಕಧಿಮರ ಕಳ್ಳಹಣದ ಸ್ವಿಸ್ ಬ್ಯಾಂಕುಗಳಾಗ್ಯಾವೋ
ತಮ್ಮ ಚಟಗಳಿಗೆ ಮಠಗಳನ್ನು ಪಬ್ ಮಾಡ್ಯಾರೋ
ನೀತಿವಂಥವರಿಗೆ ಧರ್ಮದಿಂದ ಬಹಿಸ್ಕಾರ ಹಾಕ್ಯರೋ
ಕಳ್ಳ ಕದಿಮರಿಗೆ ಧರ್ಮ ಇಲ್ಲಿ ರಕ್ಷಣೆ ನೀಡ್ಯದೋ
ಯೋಜನೆಗಳ ಹೆಸರಲಿ ರೈತರ
ಭೂಮಿನಾ ಹರಾಜಿಗಿಟ್ಟಾರೋ
ಅವರವರ ಹೆಂಡ್ತಿ, ಮಕ್ಕಳ ಹೆಸರಲಿ ಬಂಗ್ಲ ಕಟ್ಟಿಸಿ
ಸೋಪುನಾತ್ಯರ ಕೂಟ ಬಟ್ಟಿ ಕಳ್ದು
ಸೋಗು ನಡಿಸ್ಯಾರೋ
ಬಡವನ ಹೊಟ್ಟಿಗೆ ತೆರಿಗೆ ಎಂಬ ಬರಿ ಹಾಕ್ಯಾರೋ
ವಿಧವೆ ಹೆಸರಲಿ ಹಣ ಸುಲಿದು ಬಂಡಾಟ ನಡಿಸ್ಯಾರೋ
ಅದೆ ಹಣದಲಿ ವಿದೇಶಿ ಪ್ರಯಾಣ ಬೆಳಿಸ್ಯಾರೋ
ಉದ್ಯೋಗದ ಹೆಸರೇಳಿಕೊಂಡು ವಿದ್ಯಾವಂತರ ಕಯ್ಲಿ
ಚಿಪ್ಪು ಹಿಡಿಸ್ಯಾರೋ
ರಯ್ ತರು ಬೆಳೆದ ಬೆಳೆಗಳಿಗಿಲ್ಲಿ ಬೆಲೆ ಇಲ್ಲಪ್ಪ
ಕೂಡಿಟ್ಟ ಉಗ್ರಾಣಕ್ಕೀಗ ಬಾರಿ ಬೆಲೆಯಪ್ಪ
ಸಾಲದ ಬಾಧೆ ತಾಳಲಾರದೆ ರೈತರು ಉರುಲು ಎಂಬ
ನೇಣಗಂಬಕೇರ್ಯಾನೋ
ಇದನೆಲ ನಮ್ಮ ಜನ ನಾಟಕ ನೋಡುವಾಂಗ
ನೋಡಾಕಾತ್ಯಾರೋ
ಮನಸಲಿ ಅವರಿಗೆ ರೋಷ ಅನ್ನುವುದ ಬತ್ತಿ ಹೋಗ್ಯಾದೋ
ಆ ರೋಷಕೆ ಈಗ ಜೀವ ಬರಬೇಕಾದರೆ
ಮತ್ತೆ ಘಟ್ಟಿಯಾದ ಹೋರಾಟ ಶುರು ಹಾಗಬೇಕ್ಯಾಗದೋ
ಅದಕ ಶೌರ್ಯ ಬರಲು ಕವಿಗಳು
ಹಾಡ ಹಾಡಬೇಕಾಗ್ಯದೋ
ಏಳ್ರಪ್ಪೋ ಏಳ್ರಿ ಇನ್ನಾದರೂ ಕಣ್ ತೆರೆದು
ನಿಮ್ಮ ನಿಮ್ಮ ಹೊಲ ಮನಿ ನೋಡ್ರಿ
ಇಲ್ಲಂದ್ರ………………!
ಗವಿ. ಕವಿವಿ, ಹಂಪಿ
Tags : ಎಂಥ - ಕಾಲ - ಬಂತಪ್ಪಾ…

